ಶಿಕ್ಷಣ ಎಲ್ಲಾ ಸಾಧನೆಗಳಿಗೆ ಮೂಲ. ಅಂತಹ ಶಿಕ್ಷಣವನ್ನು ಕಾಲೋಚಿತ ಮತ್ತು ಸಮಯೋಚಿತವಾಗಿ ನೀಡುವ ವ್ಯವಸ್ಥೆಯೊಂದು ರೂಪುಗೊಳ್ಳಲೇ ಬೇಕು ಎಂಬ ಹಿನ್ನಲೆಯಲ್ಲಿ ಪ್ರಜ್ಞಾಎಜುಕೇಶನ್ ಟ್ರಸ್ಟ್ 2008 ರಲ್ಲಿ ಪೇಸ್ ಪದವಿ ಪೂರ್ವ ಕಾಲೇಜನ್ನು ಆರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಹೆಜ್ಜೆ ಇಟ್ಟಿತು. ಇದರ ಅಂಗ ಸಂಸ್ಥೆ ಪೇಸ್ ಇಂಟರ್‌ನ್ಯಾಷನಲ್ ಸ್ಕೂಲ್. ಇದು ಆಧುನಿಕ ತಂತ್ರಜ್ಞಾನ ಮತ್ತು ಭಾರತೀಯ ಸಂಸ್ಕೃತಿಯ ಸಮ್ಮಿಲನ. ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣದ ಜೊತೆ ಸಂಸ್ಕಾರದ ಗಂಧಲೇಪವೂ ಆಗಬೇಕೆಂಬುದು ನಮ್ಮ ಆಶಯ.
ಸಿ.ಬಿ.ಎಸ್.ಇ. ಪಠ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕೆಯ ನಾನಾ ಮಜಲುಗಳಿಗೆ ಸೂಕ್ತವಾದ ಅವಕಾಶಗಳನ್ನು ಕಲ್ಪಿಸುವುದು ನಮ್ಮ ಉದ್ದೇಶ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ನಿಟ್ಟಿನಲ್ಲಿ ಪಠ್ಯದ ಜೊತೆ ಕಲೆ, ಕ್ರೀಡೆ, ಕೌಶಲ ಇವೇ ಮೊದಲಾದ ಕ್ಷೇತ್ರಗಳಲ್ಲಿ ಮಕ್ಕಳನ್ನು ತೊಡಗಿಸಿಕೊಂಡು ಬೆಳೆಯಬೇಕು. ಪಠ್ಯದ ಕಲಿಕೆಗೆ ಪೂರಕವಾಗಿ ಆಧುನಿಕ ತಂತ್ರಜ್ಞಾನಯುಕ್ತ ತರಗತಿ ಮತ್ತು ಪ್ರಯೋಗಾಲಯಗಳನ್ನೂ, ಕಲೆ, ಕ್ರೀಡೆ ಮತ್ತು ಕೌಶಲ್ಯಾಭಿವೃದ್ಧಿಗೆ ಪೂರಕವಾದ ಆವರಣವನ್ನೂ ಪೇಸ್ ನೀಡುತ್ತದೆ.ೇಸ್ ನೀಡುತ್ತದೆ.
ಜಾಗತಿಕ ಸವಾಲುಗಳಿಗೆ ಮಕ್ಕಳು ಸದೃಢರಾಗಬೇಕು, ಅವರಲ್ಲಿ ಆಧುನಿಕ ದೃಷ್ಟಿಕೋನ ಜಾಗೃತವಾಗಬೇಕು. ವ್ಯಕ್ತಿತ್ವ ವಿಕಸನಗೊಂಡು ಸಕಾರಾತ್ಮಕ ಭಾವನೆಗಳು ಮೂಡಬೇಕು. ಆಗ ಮಾತ್ರ ಒಂದು ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಪ್ರೌಢಶಿಕ್ಷಣದವರೆಗೆ ವಿದ್ಯಾರ್ಥಿಗಳನ್ನು ಸರ್ವ ಆಯಾಮಗಳಲ್ಲೂ ಸಿದ್ಧಪಡಿಸಲು ನುರಿತ ಮತ್ತು ಸಮರ್ಪಣಾ ಮನೋಭಾವದ ಶಿಕ್ಷಕ ವೃಂದವಿದೆ.
ವಿಶ್ವದರ್ಜೆಯ ಪಠ್ಯ ಪುಸ್ತಕಗಳ ಅಳವಡಿಕೆ, ಆಧುನಿಕ ಕಲಿಕಾ ವಿಧಾನಗಳು, ತಂತ್ರಜ್ಞಾನದ ಮೇಲೈಸುವಿಕೆಯಿಂದ ವಿದ್ಯೆಯನ್ನು ಅರಸಿ ಬರುವ ಮಕ್ಕಳಿಗೆ ಪೇಸ್ ವರದಾನವಾಗುತ್ತದೆ.